ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶದ ಬಳಿಯ ಮಾಲಿನ್ಯಗೊಂಡ ಹಳ್ಳದ ನೀರು ಮತ್ತು ಭೀಮಾ ನದಿಗೆ ತ್ಯಾಜ್ಯ ಸೇರುವ ಆರೋಪದ ಪ್ರತಿನಿಧಿ ದೃಶ್ಯ

ಭೀಮೆಯ ನೀರಿಗೆ ಏನು ಸೇರುತ್ತಿದೆ? ತ್ಯಾಜ್ಯ ನೀರಿನ ಆರೋಪ: ಜನ-ಜಾನುವಾರುಗಳ ಜೀವಜಲಕ್ಕೆ ಅಪಾಯ!

ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಸಂಸ್ಕರಿಸದ ಕೆಮಿಕಲ್ ಮಿಶ್ರಿತ ತ್ಯಾಜ್ಯ ನೀರು ಭೀಮಾ ನದಿಯತ್ತ ಹರಿಯುತ್ತಿದೆ ಎಂಬ ಆರೋಪದ ನಡುವೆ ಸರ್ಕಾರ ಹೊಸ ಪರಿಶೀಲನೆ ಮತ್ತು ಮಾದರಿ ಪರೀಕ್ಷೆಗೆ ಆದೇಶಿಸಿದೆ.