ಗಜೇಂದ್ರಗಡದ ಬಡಾವಣೆಯಲ್ಲಿ ಕೆಸರುಮಯ ರಸ್ತೆ, ನಿಂತ ಕೊಳಚೆ ನೀರು ಮತ್ತು ಚರಂಡಿ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವ ನಿವಾಸಿಗಳು

ತೆರಿಗೆ ಕೊಟ್ಟರೂ ಸೌಲಭ್ಯ ಎಲ್ಲಿದೆ? ರಸ್ತೆ ಚರಂಡಿ ನಾಪತ್ತೆ: ಪುರಸಭೆ ನಿರ್ಲಕ್ಷ್ಯದ ಆರೋಪ!

ತೆರಿಗೆ ಮತ್ತು ನೀರಿನ ಶುಲ್ಕ ಪಾವತಿಸುತ್ತಿದ್ದರೂ ಗಜೇಂದ್ರಗಡದ ಹಲವು ಬಡಾವಣೆಗಳಲ್ಲಿ ರಸ್ತೆ, ಚರಂಡಿ ಮತ್ತು ನೈರ್ಮಲ್ಯ ಸಮಸ್ಯೆಗಳು ಮುಂದುವರಿದಿವೆ. ಶಾಶ್ವತ ಪರಿಹಾರಕ್ಕಾಗಿ ನಿವಾಸಿಗಳು ಪುರಸಭೆಯನ್ನು ಒತ್ತಾಯಿಸುತ್ತಿದ್ದಾರೆ.