Indian voter using smartphone while social media algorithms influence political opinions

ವಾಸ್ತವದಿಂದ ಭಾವನೆಗಳ ಕಡೆಗೆ: Social Media Algorithms ಮತ್ತು ಬದಲಾಗ್ತಿರೋ ಭಾರತೀಯ ಮತದಾರನ ಮನಸ್ಸು

ನಾವು ನೋಡುವ ಪ್ರತಿಯೊಂದು ಪೋಸ್ಟ್‌, ಪ್ರತಿಯೊಂದು ವಿಡಿಯೋ ಮತ್ತು ಪ್ರತಿಯೊಂದು ರೀಲ್ ಕೇವಲ ಮನರಂಜನೆ ಅಲ್ಲ. ಅವು ನಮ್ಮ ಭಯ, ಕೋಪ, ಗುರುತು ಮತ್ತು ರಾಜಕೀಯ ಚಿಂತನೆಗಳನ್ನು ನಿಧಾನವಾಗಿ ರೂಪಿಸಬಹುದು ಎಂದು ಈ ಸಂಶೋಧನಾ ವರದಿ ವಾದಿಸುತ್ತದೆ. ಮತದಾರರು ಆಡಳಿತದ ಪ್ರಶ್ನೆಗಳಿಂದ ಗುರುತಿನ ಪ್ರಶ್ನೆಗಳತ್ತ ಹೇಗೆ ಸರಿಯುತ್ತಾರೆ ಎಂಬುದನ್ನು ಮನೋವಿಜ್ಞಾನ ಮತ್ತು ಡಿಜಿಟಲ್ ಅಲ್ಗಾರಿದಮ್‌ಗಳ ದೃಷ್ಟಿಯಿಂದ ಇದು ವಿಶ್ಲೇಷಿಸುತ್ತದೆ.